ರೈಲ್ವೇ ಕಾಮಗಾರಿ: ಯಶವಂತಪುರ ರೈಲು ನಿಲ್ದಾಣದಲ್ಲಿ 15 ದಿನ ರೈಲು ಸಂಚಾರ ವ್ಯತ್ಯಯ ಇಂದಿನಿಂದ ಸೆ.4ರವರೆಗೆ 2 ಮತ್ತು 3ನೆ ಪ್ಲಾಟ್ ಫಾರಂ ಬಂದ್ ಆಗಲಿದ್ದು, ಸೆ.5 ರಿಂದ 19ರವರೆಗೆ 4 ಮತ್ತು 5ನೆ ಪ್ಲಾಟ್ ಫಾರಂ ಬಂದ್ ಆಗಲಿದೆ. ಈ ಕಾರಣಕ್ಕೆ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ. ಬೆಂಗಳೂರು: ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ನಿಲ್ದಾಣದ 2, 3, 4, 5 ಸಂಖ್ಯೆಗಳ ಪ್ಲಾಟ್ ಫಾರಂಗಳಲ್ಲಿ ನಿಲ್ಲುತ್ತಿದ್ದ ಕೆಲ ರೈಲುಗಳ ಸಂಚಾರವನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಬುಧವಾರ ಮಾಹಿತಿ ನೀಡಿದೆ.ಇಂದಿನಿಂದ ಸೆ.4ರವರೆಗೆ 2 ಮತ್ತು 3ನೆ ಪ್ಲಾಟ್ ಫಾರಂ ಬಂದ್ ಆಗಲಿದ್ದು, ಸೆ.5 ರಿಂದ 19ರವರೆಗೆ 4 ಮತ್ತು 5ನೆ ಪ್ಲಾಟ್ ಫಾರಂ ಬಂದ್ ಆಗಲಿದೆ. ಈ ಕಾರಣಕ್ಕೆ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ.ತುಮಕೂರು- ಕೆಎಸ್‍ಆರ್ ಬೆಂಗಳೂರು ಮತ್ತು ಕೆಎಸ್‍ಆರ್ ಬೆಂಗಳೂರು-ತುಮಕೂರು ರೈಲು ಸಂಚಾರವನ್ನು ಇಂದಿನಿಂದ ಸೆ.19ರವರೆಗೆ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.ತುಮಕೂರು-ಯಶವಂತಪುರ ರೈಲು ಇಂದಿನಿಂದ ಸೆ.19ರವರೆಗೆ ಚಿಕ್ಕಬಾಣಾವರ- ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ಯಶವಂತಪುರ-ಹೊಸೂರು ಮಧ್ಯೆ ಸಂಚರಿಸುವ ರೈಲು ಇಂದಿನಿಂದ ಸೆ.19ರವರೆಗೆ ಯಶವಂತಪುರ- ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ ಎಂದು ತಿಳಿಸಿದೆ.ಯಾವೆಲ್ಲಾ ರೈಲು ಭಾಗಶಃ ರದ್ದು?06574 ತುಮಕೂರು ಯಶವಂತಪುರ ಎಕ್ಸ್‌ಪ್ರೆಸ್‌ - ಚಿಕ್ಕಬಾಣಾವರಕ್ಕೆ ಕೊನೆ.06591 ಯಶವಂತಪುರ ಹೊಸೂರು - ಹೆಬ್ಬಾಳದಿಂದ ಆರಂಭ.06580 ತುಮಕೂರು ಯಶವಂತಪುರ - ಚಿಕ್ಕಬಾಣಾವರಕ್ಕೆ ಕೊನೆ.06592 ಹೊಸೂರು ಯಶವಂತಪುರ - ಹೆಬ್ಬಾಳಕ್ಕೆ ಕೊನೆ.06593 ಯಶವಂತಪುರ ಚಿಕ್ಕಬಳ್ಳಾಪುರ - ಯಲಹಂಕದಿಂದ ಆರಂಭ06594 ಚಿಕ್ಕಬಳ್ಳಾಪುರ ಯಶವಂತಪುರ - ಯಲಹಂಕಕ್ಕೆ ಕೊನೆ.06393 ಯಶವಂತಪುರ ಹೊಸೂರು ಎಕ್ಸ್‌ಪ್ರೆಸ್‌ - ಹೆಬ್ಬಾಳದಿಂದ ಆರಂಭ.06394 ಹೊಸೂರು ಯಶವಂತಪುರ - ಹೆಬ್ಬಾಳಕ್ಕೆ ಕೊನೆ.06573 ಯಶವಂತಪುರ-ತುಮಕೂರು ಎಕ್ಸ್‌ಪ್ರೆಸ್‌ ಚಿಕ್ಕಬಾಣಾವಾರದಿಂದ ಆರಂಭ.16239 ಚಿಕ್ಕಮಗಳೂರು -ಯಶವಂತಪುರ ಎಕ್ಸ್‌ಪ್ರೆಸ್‌ ಚಿಕ್ಕಬಾಣಾವಾರಕ್ಕೆ ಕೊನೆ.16240 ಯಶವಂತಪುರ- ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ ಚಿಕ್ಕಬಾಣಾವಾರದಿಂದ ಆರಂಭ.16208 ಮೈಸೂರು -ಯಶವಂತಪುರ ಎಕ್ಸ್‌ಪ್ರೆಸ್‌ ಚಿಕ್ಕಬಾಣಾವಾರಕ್ಕೆ ಕೊನೆ.16211 ಯಶವಂತಪುರ-ಸೇಲಂ ಎಕ್ಸ್‌ಪ್ರೆಸ್‌ ಹೆಬ್ಬಾಳದಿಂದ ಆರಂಭ.16212 ಸೇಲಂ -ಯಶವಂತಪುರ ಎಕ್ಸ್‌ಪ್ರೆಸ್‌ ಹೆಬ್ಬಾಳಕ್ಕೆ ಕೊನೆ.16207 ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್‌ ಚಿಕ್ಕಬಾಣಾವಾರದಿಂದ ಆರಂಭ.17211 ಮಚಲೀಪಟ್ಟಣಂ-ಯಶವಂತಪುರ ಎಕ್ಸ್‌ಪ್ರೆಸ್‌ - ಯಲಹಂಕದಲ್ಲಿ ಕೊನೆ.17212 ಯಶವಂತಪುರ-ಮಚಲೀಪಟ್ಟಣಂ ಎಕ್ಸ್‌ಪ್ರೆಸ್‌ - ಯಲಹಂಕದಿಂದ ಆರಂಭ.12194 ಜಂಬಲ್‌ಪುರ್‌ -ಯಶವಂತಪುರ ಎಕ್ಸ್‌ಪ್ರೆಸ್‌ ಯಲಹಂಕದಲ್ಲಿ ಕೊನೆ.12193 ಯಶವಂತಪುರ-ಜಂಬಲ್‌ಪುರ ಎಕ್ಸ್‌ಪ್ರೆಸ್‌ ಯಲಹಂಕದಿಂದ ಆರಂಭ.06579 ಯಶವಂತಪುರ-ತುಮಕೂರು ಎಕ್ಸ್‌ಪ್ರೆಸ್‌ ಚಿಕ್ಕಬಾಣಾವಾರಕ್ಕೆ ಕೊನೆ.22883 ಪುರಿ -ಯಶವಂತಪುರ ಎಕ್ಸ್‌ಪ್ರೆಸ್‌ ಯಲಹಂಕದಿಂದ ಆರಂಭ.22884 ಯಶವಂತಪುರ-ಪುರಿ ಎಕ್ಸ್‌ಪ್ರೆಸ್‌ ಯಲಹಂಕಕ್ಕೆ ಕೊನೆ.19301 ಡಾ. ಅಂಬೇಡ್ಕರ್‌ ನಗರ್‌ -ಯಶವಂತಪುರ ಎಕ್ಸ್‌ಪ್ರೆಸ್‌ ಯಲಹಂಕಕ್ಕೆ ಕೊನೆ.19302 ಯಶವಂತಪುರ-ಡಾ. ಅಂಬೇಡ್ಕರ್‌ ನಗರ್‌ ಎಕ್ಸ್‌ಪ್ರೆಸ್‌ ಯಲಹಂಕದಿಂದ ಆರಂಭ.ಯಾವೆಲ್ಲಾ ರೈಲು ಮಾರ್ಗ ಬದಲಾವಣೆ?22697 ಹುಬ್ಬಳ್ಳಿ - ಚೆನ್ನೈ ಎಕ್ಸ್‌ಪ್ರೆಸ್‌.22698 ಚೆನ್ನೈ ಹುಬ್ಬಳ್ಳಿ ಎಕ್ಸ್‌ಪ್ರೆಸ್‌.06512 ಬಾಣಸವಾಡಿ ತುಮಕೂರು ಎಕ್ಸ್‌ಪ್ರೆಸ್‌.06511 ತುಮಕೂರು ಬಾಣಸವಾಡಿ ಎಕ್ಸ್‌ಪ್ರೆಸ್‌.17310 ವಾಸ್ಕೋ ಡ ಗಾಮ ಯಶವಂತಪುರ ಎಕ್ಸ್‌ಪ್ರೆಸ್‌.17309 ಯಶವಂತಪುರ ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್‌.11312 ಹಾಸನ ಸೊಲ್ಲಾಪುರ ಎಕ್ಸ್‌ಪ್ರೆಸ್‌.11311 ಸೊಲ್ಲಾಪುರ ಹಾಸನ ಎಕ್ಸ್‌ಪ್ರೆಸ್‌